Skip to main content

Posts

Showing posts from January, 2025

Kayalareno Krishna song lyrics / ಕಾಯಲಾರೆನೋ ಕೃಷ್ಣ ಹಾಡು

  ಕಾಯಲಾರೆನೋ ಕೃಷ್ಣ ಕಂಡವರ ಬಾಗಿಲನು ನಾಯೀ ಕುನ್ನಿಯಂತೆ ನರರ ಪೀಡಿಸುತ॥ ಕಾಯಲಾರೆನೊ ಕೃಷ್ಣಾ... ಉದಯದಲಿ ಯೆದ್ದು ಸಂಧ್ಯಾ ವಿಧಿಗಳ ತೊರೆದು ಪದುಮನಾಭನ ಸ್ಮರಣೆ ಮೊದಲಿಲ್ಲದೆ ಮುದದಿ ನಿನ್ನರ್ಚಿಸದೆ ನರರ ಸದನವ ಪೊಕ್ಕು ಒದಗಿ ಸೇವೆ ಮಾಡಿ ಅವರ ಬಾಗಿಲನು …. ಕಾಯಲಾರೆನೋ ಕೃಷ್ಣ ಕಂಡವರ ಬಾಗಿಲನು ನಾಯೀ ಕುನ್ನಿಯಂತೆ ನರರ ಪೀಡಿಸುತ॥ ಕಾಯಲಾರೆನೊ ಕೃಷ್ಣಾ... ಕಲ್ಲು ಕರಗಿಸಬಹುದು ಕಡಲೆ ಹುರಿಗಡಲೆಯಲ್ಲಿ ತೈಲವನ್ನು ತೆಗೆದಾಗ ಉಣಬಹುದು ಬಲ್ಲಿದರಮನಸು ಮೆಚ್ಚಿಸಲಾರೆ ಪ್ರತಿದಿನದಿ ಹಲ್ಲು ಗಿರಿ ಗಿರಿದು ಹಂಬಲಿಸಿ ಬಾಯಿ ಬಿಡುತ ಕಾಯಲಾರೆನೋ ಕೃಷ್ಣ ಕಂಡವರ ಬಾಗಿಲನು ನಾಯೀ ಕುನ್ನಿಯಂತೆ ನರರ ಪೀಡಿಸುತ॥ ಕಾಯಲಾರೆನೊ ಕೃಷ್ಣಾ... ಇಂತು ನಾನಾ ಚಿಂತೆ ಯಲಿ ನಿನ್ನ ನೆನೆಯದಲೆ ಭ್ರಾಂತಿಯೆಂಬ ಹೆಬ್ಬಲಿಗೆ ಸಿಲುಕಿ ಅಂತ್ಯ ಮೊದಲನು ಕಾಣೆ ಅರಿಕೆ ನಿನಗಿನಿತಯ್ಯ ನಿಶ್ಚಿಂತನಾಗಿರಿಸಯ್ಯ ಪುರಂದರ ವಿಠಲ ಕಾಯಲಾರೆನೋ ಕೃಷ್ಣ ಕಂಡವರ ಬಾಗಿಲನು ನಾಯೀ ಕುನ್ನಿಯಂತೆ ನರರ ಪೀಡಿಸುತ॥ ಕಾಯಲಾರೆನೊ ಕೃಷ್ಣಾ...॥ Kayalareno Krishna kandavara bagilanu  Nayi kunni yante narara peedisuta  Kayalareno Krishna … Udayadali yeddu  Sandhya vidhigala Toredu  Padumanabhana smarane Modalillade  Mudadi ninnarchisade  Narara ...