ಕಾಯಲಾರೆನೋ ಕೃಷ್ಣ ಕಂಡವರ ಬಾಗಿಲನು
ನಾಯೀ ಕುನ್ನಿಯಂತೆ ನರರ ಪೀಡಿಸುತ॥
ಕಾಯಲಾರೆನೊ ಕೃಷ್ಣಾ...
ಉದಯದಲಿ ಯೆದ್ದು
ಸಂಧ್ಯಾ ವಿಧಿಗಳ ತೊರೆದು
ಪದುಮನಾಭನ ಸ್ಮರಣೆ ಮೊದಲಿಲ್ಲದೆ
ಮುದದಿ ನಿನ್ನರ್ಚಿಸದೆ
ನರರ ಸದನವ ಪೊಕ್ಕು
ಒದಗಿ ಸೇವೆ ಮಾಡಿ ಅವರ ಬಾಗಿಲನು ….
ಕಾಯಲಾರೆನೋ ಕೃಷ್ಣ ಕಂಡವರ ಬಾಗಿಲನು
ನಾಯೀ ಕುನ್ನಿಯಂತೆ ನರರ ಪೀಡಿಸುತ॥
ಕಾಯಲಾರೆನೊ ಕೃಷ್ಣಾ...
ಕಲ್ಲು ಕರಗಿಸಬಹುದು
ಕಡಲೆ ಹುರಿಗಡಲೆಯಲ್ಲಿ
ತೈಲವನ್ನು ತೆಗೆದಾಗ ಉಣಬಹುದು
ಬಲ್ಲಿದರಮನಸು ಮೆಚ್ಚಿಸಲಾರೆ ಪ್ರತಿದಿನದಿ
ಹಲ್ಲು ಗಿರಿ ಗಿರಿದು ಹಂಬಲಿಸಿ ಬಾಯಿ ಬಿಡುತ
ಕಾಯಲಾರೆನೋ ಕೃಷ್ಣ ಕಂಡವರ ಬಾಗಿಲನು
ನಾಯೀ ಕುನ್ನಿಯಂತೆ ನರರ ಪೀಡಿಸುತ॥
ಕಾಯಲಾರೆನೊ ಕೃಷ್ಣಾ...
ಇಂತು ನಾನಾ ಚಿಂತೆ
ಯಲಿ ನಿನ್ನ ನೆನೆಯದಲೆ
ಭ್ರಾಂತಿಯೆಂಬ ಹೆಬ್ಬಲಿಗೆ ಸಿಲುಕಿ
ಅಂತ್ಯ ಮೊದಲನು ಕಾಣೆ
ಅರಿಕೆ ನಿನಗಿನಿತಯ್ಯ
ನಿಶ್ಚಿಂತನಾಗಿರಿಸಯ್ಯ ಪುರಂದರ ವಿಠಲ
ಕಾಯಲಾರೆನೋ ಕೃಷ್ಣ ಕಂಡವರ ಬಾಗಿಲನು
ನಾಯೀ ಕುನ್ನಿಯಂತೆ ನರರ ಪೀಡಿಸುತ॥
ಕಾಯಲಾರೆನೊ ಕೃಷ್ಣಾ...॥
Kayalareno Krishna kandavara bagilanu
Nayi kunni yante narara peedisuta
Kayalareno Krishna …
Udayadali yeddu
Sandhya vidhigala Toredu
Padumanabhana smarane Modalillade
Mudadi ninnarchisade
Narara sadanava Pokku
Odagi seveya maadi avara bagilanu ….
Kayalareno Krishna kandavara bagilanu
Nayi kunni yante narara peedisuta
Kayalareno Krishna …
Kallu karagisa bahudu
Kadale hurigadaleyalli
Tailavannu tegedaga Unnabahudu
Ballidaramanasu mecchisalare pratidinadi
Hallu giri Giridu hambalisi bai biduta
Kayalareno Krishna kandavara bagilanu
Nayi kunni yante narara peedisuta
Kayalareno Krishna …
Intu nana chinte
Yali Ninna neneyadale
Bhrantiyendemba hebbalege siluki
Antya modalanu kaane
Arike ninaginitayya
Nischintanagirisayya Purandara vitthala
Kayalareno Krishna kandavara bagilanu
Nayi kunni yante narara peedisuta
Kayalareno Krishna …
Comments
Post a Comment