Skip to main content

Posts

Showing posts from November, 2023

Palise Née Yennanu Shri Gowri | ಪಾಲಿಸೆ ನೀ ಎನ್ನನು ಶ್ರೀ ಗೌರಿ

ಪಾಲಿಸೆ ನೀ ಎನ್ನನು ಶ್ರೀ ಗೌರೀ  ಪಾಲಿಸೆ ನೀ ಎನ್ನನು  ||pa| ಪಾಲಿಸೆ ನಿನ್ನಯ ಪಾಲಿಗೆ ಬಂದೆನು (2)| ಬೀಳುವೆ ಸರ್ವದ ಕಾಲಿಗೆ ಕರುಣದೀ (2)|| a.pa|| ಪಾಲಿಸೆ ನೀ ಎನ್ನನು ಶ್ರೀ ಗೌರೀ  ಪಾಲಿಸೆ ನೀ ಎನ್ನನು  ||pa| ಶರಣೆಂದವರನು ಪೊರೆವಳು ಎಂಬುವ (2) ಬಿರಿದು ನಿನ್ನದು ಎಂದರಿದೆನು ಕರುಣದಿ||(2) ಪಾಲಿಸೆ ನೀ ಎನ್ನನು ಶ್ರೀ ಗೌರೀ  ಪಾಲಿಸೆ ನೀ ಎನ್ನನು  ||pa| ಸನ್ನುತ ಪುರುಷನ ಇನ್ನೆಲ್ಲಿ ಕಾಣೆನು (2)  |ಮನ್ಮಥನೆಂಬುವ ಬನ್ನಬಡಿಪ  ಬಲು||(2)   ಪಾಲಿಸೆ ನೀ ಎನ್ನನು ಶ್ರೀ ಗೌರೀ  ಪಾಲಿಸೆ ನೀ ಎನ್ನನು  ||pa| ಕಾಣೆನು ಶಾಂತಿಯ ಏನೆಂದ್‌ಹೇಳಲಿ (2) ಪ್ರಾಣೇಶ ವಿಠಲನು ತಾನೆ ಬಲ್ಲನು ತಾಯೆ||(2) ಪಾಲಿಸೆ ನೀ ಎನ್ನನು ಶ್ರೀ ಗೌರೀ  ಪಾಲಿಸೆ ನೀ ಎನ್ನನು  ಪಾಲಿಸೆ ನಿನ್ನಯ ಪಾಲಿಗೆ ಬಂದೆನು |ಬೀಳುವೆ ಸರ್ವದ ಕಾಲಿಗೆ ಕರುಣದೀ || a.pa|| ಪಾಲಿಸೆ ನೀ ಎನ್ನನು (3) ಶ್ರೀ ಗೌರೀ  ||pa| Pālise nī ennanu śrī gaurī pālise nī ennanu ||pa|   pālise ninnaya pālige bandenu (2)| bīḷuve sarvada kālige karuṇadī (2)|| a.Pa||   pālise nī ennanu śrī gaurī pālise nī ennanu ||pa|  Sharaṇendavaranu porevaḷu embuva (2) biridu ninnadu endaridenu karuṇadi||(2)   pālise nī ennanu śrī gaurī pālise nī ennanu ||pa|   sannuta puruṣhana innelli kāṇenu (2) |manmathanemb

Deepavali Aarti Hadu | ಆರುತಿ ಮಾಡು ಬೇಗನೆ

ಆರುತಿ ಮಾಡು ಬೇಗನೇ ಆರುತಿ ಮಾಡು ಬೇಗನೇ ಶ್ಯಾಮ ಸುಂದರಗೀಗ ಕೋಮಲಂಗ ದೇವನಿಗೆ ಆರುತಿ ಮಾಡು ಬೇಗನೇ.... ಗೋಕುಲದಿ ವಾಸಿಪಗೆ ಆಕಳಗಳ ಕಾಯುವಗೆ ಗೋಪಿಯಾರ ಪ್ರಿಯನಿಗೆ ಗೋಪಾಲ ಕೃಷ್ಣನಿಗೆ.... ಆರುತಿ ಮಾಡು ಬೇಗನೇ ವೃಂದಾವನದಿ ಕೂಳಿತು ಪೊಂಗಲನೂಡುವಗೆ ಮಂದ ಹಾಸ್ಯದಿ ನಗುತ ಸುಂದರಾಂಗ ದೇವನಿಗೆ.... ಆರುತಿ ಮಾಡು ಬೇಗನೇ ಆರುತಿ ಮಾಡು ಬೇಗನೇ Āruti māḍu bēganē āruti māḍu bēganē śyāma sundaragīga kōmalaṅga dēvanige āruti māḍu bēganē.... Gōkuladi vāsipage ākaḷagaḷa kāyuvage gōpiyāra priyanige gōpāla kr̥ṣṇanige.... Āruti māḍu bēganē vr̥ndāvanadi kūḷitu poṅgalanūḍuvage manda hāsyadi naguta sundarāṅga dēvanige.... Āruti māḍu bēganē āruti māḍu bēganē

ಪವಮಾನ ಜಗದ ಪ್ರಾಣ || Pavamana Jagada Praana song lyrics in Kannada and English

ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ ಪವನ |ಪ| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ| ಪವಮಾನ.... ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ ಪವನ |ಪ| ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ...... ಕಾಮಾದಿ ವರ್ಗ ರಹಿತ.... ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ....ರಾಮಚಂದ್ರನ ನಿಜದೂತ.. ಯಾಮ ಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು || 1 || ಪವಮಾನ.... ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ ಪವನ |ಪ| ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ.... ದುರ್ಜನವನ ಕುಠಾರ... ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘ ಪರಿಹಾರ.... ಸಜ್ಜನರಘ ಪರಿಹಾರ.. ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗ ಅರಿವಂತೆ ಗರ್ಜನೆ ಮಾಡಿದಿ ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪದದ ಧುಳಿ ಮಾರ್ಜನದಲಿ ಭವ ವರ್ಜಿತನೆನಿಸೊ || 2 || ಪವಮಾನ.... ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ ಪವನ |ಪ| ಪ್ರಾಣ ಅಪಾನ ಊದಾನ ವೄನ ಸಮಾನ ಆನಂದ ಭಾರತಿ ರಮಣ.... ಆನಂದ ಭಾರತಿ ರಮಣ...ನೀನೆ ಶರ್ವಾದಿ ಗೀರ್ವಾಣ ವೇದ್ಯರಿಗೆ ಜ್ಞಾನಧನ ಪಾಲಿಪ ವರೇಣ್ಯ.... ಧನ ಪಾಲಿಪ ವರೇಣ್ಯ... ನಾನು ನಿರುತದಲಿ ಏನೇನೆಸಗಿದೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ ಪ್ರಾಣನಾಥ ಶ್