Skip to main content

Bharave Bharati Ramana | ಭಾರವೆ ಭಾರತಿ ರಮಣ song lyrics in Kannada and english

 


ಭಾರವೇ ಭಾರತಿ ರಮಣ||

ನಿನಗೆ ನಾ ಭಾರವೇ ಭಾರತೀ ರಮಣ(2)||pa||

ಲಂಕಾನಾಥನ ಬಿಂಕವ ಮುರಿದೆ
ಅಕಳಂಕ ಚರಿತನ ಕಿಂಕರನೆನಿಸಿದೆ||
ಪಂಕಜಾಕ್ಷಿಗೆ ಅಂಕಿತದುಂಗುರ ಕೊಟ್ಟೆ||
ಶಂಕೆಯಿಲ್ಲದೆ ಲಂಕೆ ದಹಿಸಿರುವೆ ||ಭಾರವೇ||

ಸೋಮಕುಲದಿ ನಿಸ್ಸೀಮ ಮಹಿಮನೆನಿಸಿ
ತಾಮಸ ಬಕನ ನಿರ್ಧೂಮವ ಮಾಡಿದೆ||
ಕಾಮಿನಿ ಮೋಹಿಸೆ ಪ್ರೇಮದಿ ಸಲುಹಿದೆ||
ತಾಮರಸೌಖ್ಯನ ಸೇವೆಯ ಮಾಡಿದೆ ||ಭಾರವೇ||

ವೇದವ್ಯಾಸರ ಪೂಜೆಯ ಮಾಡಿ
ಮೋದದಿಂದಲಿ ಬಹುವಾದಗಳಾಡಿದೆ ||
ಅಧಮ ಶಾಸ್ತ್ರಗಳ ಹೋಮವ ಮಾಡಿದೆ||
ವಿಜಯವಿಠ್ಠಲನ ಸೇವಕನೆನಿಸಿದೆ ||ಭಾರವೇ||

BhAravE BhArati ramaNa||
ninage nA BhAravE BhAratI ramaNa (2)||pa||

lankAnAthana binkava muride
akaLanka caritana kinkaraneniside ||
pankajAkShige ankitadungura koTTe||
Shankeyillade lanke dahisiruve ||BhAravE||

sOmakuladi nissIma mahimanenisi
tAmasa bakana nirdhUmava mADide ||
kAmini mOhise prEmadi saluhide||
tAmarasauKyana sEveya mADide ||BhAravE||

vEdavyAsara pUjeya mADide
mOdadindali bahuvAdagaLADide ||
adhama SAstragaLa hOmava mADide||
vijayaviThThalana sEvakaneniside ||BhAravE||

Link to our YouTube channel👇🏻



Comments

Popular posts from this blog

SHARANU SIDDHI VINAYAKA - LYRICS (Kannada & English)

SHARANU SIDDHI VINAYAKA LYRICS in kannada and English  👉🏻lyrics In English: sharaNu siddhi vinAyaka sharaNu vidyA pradAyaka sharaNu pArvati tanaya mUruti sharaNu mUshaka vAhana niTila nEtrana dEvi sutane nAgabhUShaNa priyane taTila tAnkita kOmalAngane karNa kuNDala dhArane baTTa muttina padaka hArane bAhu hasta chatuShTane iTTa tOdugeya hEma kankaNa pAsha ankuSha dhArane kukShi maha lambOdarane ikShuchApana gelidane pakShi vAhana siri purandara viTThalana nija dAsane 👉🏻lyrics In Kannada ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಷಕವಾಹನ || ಪಲ್ಲವಿ || ನಿಟಿಲನೇತ್ರನೇ  ದೀವಿ ಸುತನೆ ನಾಗಭೂಷಣ ಪ್ರೀಯನೇ ತಟೆಲತಾಂಕಿತ ಕೋಮಲಾಂಗನೇ ಕರ್ಣಕುಂಡಲ ಧಾರನೆ ||1|| ಬಟ್ಟಮುತ್ತಿನ ಪದಕಹಾರನೇ ಬಾಹುಹಸ್ತ ಚತುಷ್ಟನೇ ಇಟ್ಟತೊಡುಗೆಯ ಹೇಮಕಂಕಣ ಪಾಶ ಅಂಕುಶಧಾರಣನೆ ||2|| ಕುಕ್ಷಿಮಹಾಲಂಬೋದರನೇ  ಇಕ್ಷುಚಾಪನ ಗೆಲಿದನೆ ಪಕ್ಷಿವಾಹನ ಸಿರಿ ಪುರಂದರ ವಿಠ್ಠಲನ ನಿಜದಾಸನೇ ||3|| click this video to hear the tune and learn it,

Sharanembe Vani Song lyrics in Kannada and English

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ (2) ವಾಗಾಭಿಮಾನಿ ವರಬ್ರಹ್ಮಾಣಿ ಸುಂದರ ವೇಣಿ ಸುಚರಿತ್ರಾಣಿ ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ || ಜಗದೊಳು ನಿಮ್ಮ ಪೊಗಲುವೆನಮ್ಮ (2) ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ (2) ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ಪಾಡುವೆ ಶ್ರುತಿಯ ಬೇಡುವೆ ಮತಿಯ (2) ಪುರಂದರ ವಿಠ್ಠಲನ ಸೋದರ ಸೊಸೆಯ (2) ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ (2) ವಾಗಾಭಿಮಾನಿ ವರಬ್ರಹ್ಮಾಣಿ ಸುಂದರ ವೇಣಿ ಸುಚರಿತ್ರಾಣಿ (2) ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ (2) Śaraṇembe vāṇi poreye kalyāṇi (2) vāgābhimāni varabrahmaṇi sundara vēṇi sucaritrāṇi śaraṇembe vāṇi poreye kalyāṇi || jagadoḷu nim'ma pogaluvēnam'ma (2) hariya tōrisendu prārthipēnam'ma (2) śaraṇembe vāṇi poreye kalyāṇi pāḍuve śrutiya bēḍuve matīya (2) purandara viṭhṭhalana sōdara soseya (2) śaraṇembe vāṇi poreye kalyāṇi (2) vāgābhimāni varabrahmaṇi sundaratā vēṇi sucaritrāṇi (2) śaraṇembe vāṇi poreye kalyāṇi (2) Sharanembe Vani Poreye Kalyani (2) Vagabhimani Varabrahmani  Sundara Veni Sucharitrani  Sharanembe Vani Poreye Kalyani || Jagadolu Nimma Pogaluvenamma (2) Hariy...

Deva Gananayaka Song lyrics in Kannada and English | ದೇವಾ ಗಣನಾಯಕ ಪಾಲಕ

Lyrics in English   Deva Gananayaka paalaka (2) Mooshaka Vaahana Dosha Vinasha (2) Deva Gananayaka Paalaka  Karuna Dayasaara Giri Kanya kumaara (2) Sangeetakaadhara Neene Daya Saara (2) Nee bandu Daye Toro Gauri Kumaara (2) Deva Gananayaka Paalaka  Deva Gananaya (2) Deva Gananayaka Paalaka  In kannada ದೇವ ಗಣನಾಯಕ ಪಾಲಕ (2) ಮೂಷಕ ವಾಹನ ದೋಷ ವಿನಾಶ (2) ದೇವ ಗಣನಾಯಕ ಪಾಲಕ ಕರುಣಾ ದಯಾಸಾರ ಗಿರಿ ಕನ್ಯಾ ಕುಮಾರ (2) ಸಂಗೀತಾಧಾರ ನೀನೆ ದಯಾ ಸಾರ (2) ನೀ ಬಂದು ದಾಯೆ ತೋರೋ ಗೌರಿ ಕುಮಾರ (2) ದೇವ ಗಣನಾಯಕ ಪಾಲಕ ದೇವ ಗಣನಾಯ (2) ದೇವ ಗಣನಾಯಕ ಪಾಲಕ| For listening to this song sung click here 😊 and Subscribe To my YouTube channel