ಹೊಳವಂಬಟ್ಟಲು ಕೊಂಬೆಣ್ಣೆಯನು
ನಳಿನಾಕ್ಷಿ ಸಿರಿ ಮುಡಿ ಗೊಪ್ಪುವೆನು
ಥಳಿ ಥಳಿಸುವ ಪರಿಮಳ ಪನ್ನೀರಿಲೆ
ಅಭಿಷೇಕವ ನೆರವೆ |
ಸುರಗುರಳೆಂಬಂತೆ ಥಳಿಗೊಳುತಿದ್ದೆ
ನಳಿ ತೊಳಿಗೆ ಸಿರಿ ಗಂಧವ ಲೇಪಿಸಿ
ಸಿರಿಯು ಸಂಪನ್ನಿ ಮಾರ್ಜನಕೆರಗಿ
ಮಡಿಗಳನುಡಿಸುವೆನ | ಜಯ ಜಯ ಮಂಗಳ ||
ಅರಿಶಷಿಣ ಕುಂಕುಮ ಗಂಧ ಬುಕ್ಕಿಟ್ಟು
ಗೆಜ್ಜಿ ವಸ್ತ್ರ ಪಾರಿಜಾತ ಸಂಪಿಗೆಯು
ಮುಡಿಸಿ ಮಲ್ಲಿಗೆ ದಂಡಿ ಒಡಿಸಿ ತೆಂಗಿನಕಾಯಿ
ಉಡಿಗಳ ತುಂಬುವೆನ | ಜಯ ಜಯ ಮಂಗಳ ||
ಉಪ್ಪು ಕೋಸಂಬರಿ ಹಪ್ಪಳ ಸಂಡಿಗೆ
ಚೂಚ ನಿಂಬಿಹಣ್ಣು ಮಾಗಿನ ಬೇರು
ತದಕಿನ ಕಾಯಿ ಮೆಣಸಿನ ಗರಿಯು
ಲವಣ ಶಾಖವ ಬಡಿಸ
ಶಾಖಕ ಉತ್ತಮ ಚೋಗಚಿ ಕಾಯೀ
ಹಾಗಲಕಾಯಿ ಹೀರಿ ದಳವು
ಬಾಳೆದಿಂಡಿನ ತಾಳಲ ಬಡಿಸುವೆ
ಆರೋಗಣೆ ಮಾಡ | ಜಯ ಜಯ ಮಂಗಳ ||
ಸೂಕ್ಷ್ಮದ ಕೆಲಸಕೆ ಸೂಸಲ ಕಡುಬು
ಚಕ್ಕುಲಿ ಕರ್ಚಿಕಾಯಿ ಸುರಳಿ ಶೀಖೆದುಂಡಿ
ಹೋಳಿಗೆ ಕಡುಬು ಶಾವಿಗೆ ಪಾಯಸ
ಭಕ್ಷಂಗಳ ಬಡಿಸುವೆನ | ಜಯ ಜಯ ಮಂಗಳ ||
ಬೀಸೋರಿಗೆ ಬಿಚ್ಚೋರಿಗೆ ಮಂಡಿಗೆ
ಸಾಕ್ಷಾತ್ ಎಡಿ ಎಣ್ಣೋರಿಗೆ ಹೋಳಿಗೆ
ಅಚ್ಚೆಳ್ಳಿನ ಲಡ್ಡಿಗೆ ಗುಳ್ಳೋರಿಗೆ
ಫೇಣಿ ಸಕ್ಕುರಿ ಬುಂದ್ಯ
ಚಿತ್ರನ್ನವು ಕ್ಷೀರನ್ನ ವ್ರತನ್ನ
ಉತ್ತುಮ ಮಧ್ಯದಿ ದಧಿ ಮಧುರನ್ನ
ಒಪ್ಪುವ ಹಸ್ತಕೆ ದಕ್ಷಿಣೆ ತಾಂಬೂಲ
ಆರೋಗನಣೆ ಮಾಡ | ಜಯ ಜಯ ಮಂಗಳ ||
ಆರೋಗಣೆ ಮಾಡ ಅಂಬುಜ ಮಾತೆ
ಆರೋಗಣೆ ಮಾಡ ನಾರಾಯಣ ಪ್ರೀತೇ
ಆರೋಗಣೆ ಮಾಡ್ ಯೆನ್ನುತ ಕೊಲ್‌ಹಾಪುರದ
ದೇವಿ ಶ್ರೀ ಮಹಾಲಕ್ಷ್ಮಿಗೆ | ಜಯ ಜಯ ಮಂಗಳ ||
ಉತ್ತರ ದೇಶದ ಮುತ್ತೈದೆರು
ಮುತ್ತಿನ ಹಣಿಯಲಿ ಅರಿಶಿನ ಕುಂಕುಮ
ಒಪ್ಪುವ ಧ್ವನಿಯಲ್ಲಿ ಗೋತ್ರವಂಹಾಡುತ
ಯೆತ್ತಿದರಾರತಿಯ | ಜಯ ಜಯ ಮಂಗಳ || (3)
Holavambattalu Kombenneyanu
Nalinakshi Siri mudi goppuvenu
Thali thalisuva Parimala panneerile
Abhishekava nerave |
Suraguralembante thaligolutidde
Nali tolige Siri Gandhava Lepisi
Siriyu sampanni marjanakeragi
Madigalanudisuvena | Jaya Jaya Mangala ||
Arishina kumkuma Gandha bukkittu
Gejji vastra parijaata sampigeyu
Mudisi mallige dandi odisi tenginkayi
Udigala tumbuvena | Jaya Jaya Mangala ||
Uppu Kosambari happala sandige
Choocha nimbihannu magina geru
Tadakina kayi menasina gariyu
Lavana Shakhava Badisa
Shakhaka uttama chogachi kayi
Hagalakayi heeri dalavu
Baledindina talala badisuve
Aarogane maada | Jaya Jaya Mangala ||
Sookshmada kelasake soosala kadubu
Chakkuli karchikayi surlisheekhedundi
Holige kadubu Shavige Payasa
Bhakshangala badisuvena | Jaya Jaya Mangala ||
Beesorige bichorige mandige
Sakshat Yedi yennorige holige
Acchelina Laddige gullorige
Pheni sakkuri boondya
Chitrannavu ksheeranna vrutanna
Utthuma Madhyadi dadhi madhuranna
Oppuva hastake dakshine tambula
Aarogane maada | Jaya Jaya Mangala ||
Aarogane maad ambuja maate
Aarogane maad Narayana Preete
Aarogane maad Yennuta kolaapurada
Devi Shri Mahalakshmige | Jaya Jaya Mangala ||
Uttara Deshada muttaideru
Muttina haniyali arishina kumkuma
Oppuva dhvaniyalli gotravanhaduta
Yettidararatiya | Jaya Jaya Mangala || (3)
Comments
Post a Comment