Skip to main content

Posts

Showing posts from May, 2024

Bare Bhagyada Nidhiye- Lakshmi devi song in Kannada Lyrics

Lyrics in Kannada and English ಬಾರೆ ಭಾಗ್ಯದ ನಿಧಿಯೆ ಕರವೀರ ನಿವಾಸಿನಿ ಸಿರಿಯೆ || ಪ || ಬಾರೆ ಬಾರೆ ಕರವೀರ ನಿವಾಸಿನಿ ಬೀರಿ ಬಾರಿಗು ಸುಖ ತೋರು ನಮ್ಮ ಮನೆಗೆ ಬಾ , ನಿಗಮವಂದ್ಯಳು ನೀನು ನಿನ್ನ ಪೊಗಳಲಾಪೆನೆ ನಾನು | (2) ಮಗನಪರಾಧವ ತೆಗಿದೆಣಿಸದೆ ನೀ ಲಗುಬಗೆಯಿಂದಲಿ ಪನ್ನಂಗವೇಣಿಯೆ ಬಾ|| 1 || ಲೋಕ ಮಾತೆಯು ನೀನು ನಿನ್ನ ತೊಕನಲ್ಲವೇ ನಾನು | ಆಕಳು ಕರುವಿನ ಸ್ವೀಕರಿಸುವ ಪರಿ ನೀ ಕರುಣದಿ ಕಾಲಹಾಕು ನಮ್ಮ ಮನೆಗೆ ಬಾ || 2 || ಕಡೆಗೆ ನಮ್ಮನಿವಾಸ ನಮ್ಮೂಡೆಯನಂತಾದ್ರೀಶಾ | ಒಡೆಯನಿದ್ದಲ್ಲಿಗೆ ಮಡದಿ ಬಾಹಳೆ ರೂಧಿಗುಚಿತವಿದು ನಡೆ ನಮ್ಮ ಮನೆಗೆ ಬಾ ॥3॥ Bāre bhāgyada nidhiye karavīra nivāsini siriye || pa || bāre bāre karavīra nivāsini bīri bārigu sukha tōru nam'ma manege bā, nigamavandyaḷu nīnu ninna pogaḷalāpene nānu | (2) maganaparādhava tegideṇisade nī lagubageyindali pannaṅgavēṇiye bā|| 1 || lōka māteyu nīnu ninna tokanallavē nānu | ākaḷu karuvina svīkarisuva pari nī karuṇadi kālahāku nam'ma manege bā || 2 || kaḍege nam'manivāsa nam'mūḍeyanantādrīśā | oḍeyaniddallige maḍadi bāhaḷe rūdhigucitavidu naḍe nam'ma manege bā॥3॥ To sing along and learn this song clic

Hosa Kannu Enage Hacchalibeku Lyrics in Kannada & English

ಹೊಸಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾವಸುದೇವ ಸುತನ ಕಾಂಬುದಕೆ |ಪ| ಘಸಣಿಯಾಗಿದೆ ಭವ ವಿಷಯ ವಾರುಧಿಯೊಳು ಶಶಿಮುಖಿ ಕರುಣದಿ ಕಾಯೆ ತಾಯೆ|ಅ.ಪ| ಪರರ ಅನ್ನವನುಂಡು ಪರರ ಧನವ ಕಂಡು ಪರಿ ಪರಿ ಕ್ಲೇಶಗಳಿಂದ ವರಮಹಾಲಕುಮಿ  ನಿನ್ನ ಚರಣವ ಮೊರೆ ಹೊಕ್ಕೆಕರುಣದಿ ಕಣ್ಣೆತ್ತಿ ನೋಡೆ ತಾಯೆ|| ಮಂದಹಾಸಿನಿ ಭವಸಿಂಧುವಿನೊಳಗಿಟ್ಟು ಚಂದವೇ ಅಮ್ಮ ನೋಡುವದು ಕಂದನೆಂತೆಂದೆನ್ನ ಕುಂದುಗಳೆಣಿಸದೆ ಮಂದರೊಧ್ಧರನ ತೋರಮ್ಮ ತಾಯೆ|| ಅಂದಚಂದಗಳೊಲ್ಲೆ ಬಂಧು ಬಳಗವನೊಲ್ಲೆ ಬಂಧನಕೆಲ್ಲ ಕಾರಣವು ಇಂದಿರೇಶನ ಪಾದದ್ವಂದ್ವವ ತೋರಿ ಹೃನ್ಮಂದಿರದೊಳು ಬಂದು ನಿಲ್ಲೆ ತಾಯೆ  || ಹೊಸಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾ (ವಸುದೇವ ಸುತನ ಕಾಂಬುದಕೆ ) 3 |ಪ| Hosakaṇṇu enage haccalibēku jagadambāvasudēva sutana kāmbudake | ghasaṇiyāgide bhava viṣaya vārudhiyoḷu śaśimukhi karuṇadi kāye tāye. ||  parara annavanuṇḍu parara dhanava kaṇḍu pari pari klēśagaḷinda varamahālakumi ninna caraṇava more hokkekaruṇadi kaṇṇetti nōḍe tāye ||(1)  mandahāsini bhavasindhuvinoḷagiṭṭu candavē am'ma nōḍuvadu kandanentendenna kundugaḷeṇisade mandarodhdharana tōram'ma tāye ||(2) andacandagaḷolle bandhu baḷagavanolle bandhanakella kāraṇavu indirēśana pādadvandvava tōri

Bhalachandradharaga Aarti song | ಶಿವನ ಆರತಿ ಹಾಡು lyrics in Kannada and English

  ಶಿವನ ಆರತಿ ಹಾಡು lyrics in Kannada and English😊🙏🏻 Click here for the full song : play along and learn this beautiful song. ಭಾಲಚಂದ್ರಧರಗ ಭಕುತ ಜನ ಪೋಷಗ ಲೋಲ ಪಾರ್ವತಿ ಮನೋಹರ ಸಾಂಬಗ | ನೀಲ ಕಂದರ ನಿಗಮ ಭವ್ಯ ಮಹಾದೇವಗ ಕಾಲ ಹರ ಕಲ್ಪಾಂತ ಮಹಾರುದ್ರಗ ನಮೋ | ಜಯ ಮಂಗಲಂ ನಿತ್ಯ ಶುಭ ಮಂಗಳಮ್ ॥ ಗಂಗೆಯನು ಪೊತ್ತವಗ ಗಜಚರ್ಮ ನುತ್ತವಗ ಪಿಂಗಜತಟಿ ಫಣಿ ನೇತ್ರ ಕ್ಷಿಪಿವೀಷ್ಟಗ | ಮಂಗಳಾತ್ಮಕ ವದನ ವಪುತ ಹಚಿ ಭಸ್ಮವನು ಅಂಗಕ್ಕ ಲೇಪಿಸಿದ ಅಗಜವರಗ ನಮೋ | ಜಯ ಮಂಗಲಂ ನಿತ್ಯ ಶುಭ ಮಂಗಳಮ್ ॥ ರುಂಡ ಮಾಲಾಧರಗ ಮಂಡಿತ ವಿಭೂಷಣಗ ಹಿಂಡು ದೈತ್ಯರಗೊಡೆಯ ನೆನಿಸುವವಗೆ | ಬ್ರಹ್ಮಾಂಡ ಪಿಂಡಾಂಡ ಪೂಜಿತ ಮಹೇಶಗ ಚಂಡಾಂಶುಛೇದ ಶಿವ ಸಿದ್ಧೇಶಗ ನಮೋ | ಜಯ ಮಂಗಳಂ ನಿತ್ಯ ಶುಭ ಮಂಗಳಂ (2) Bhālacandradharagā bhakuta jana pōṣaga lōla pārvati manōhara sambagā | nīla kandara nigama bhavya mahādēvagā kāla hara kalpānta mahārudrāga namō | jaya maṅgalaṁ nitya śubha maṅgaḷam॥ gaṅgeyanu poṭṭavaga gajacarma nuṭṭavāga piṅgajati phaṇi nētrā kṣipivīṣṭaga | maṅgaḷātmaka vādana vapuṭa hacci bhasmavanu  aṅgakka lēpisida agajavaraga namō | jaya maṅgalaṁ nitya śubha maṅgaḷam॥ ruṇḍa mālādhāraga maṇḍita vibhūṣaṇāga | hindū daityaragoḍeya