ನಿಗಮವಂದ್ಯಳು ನೀನು ನಿನ್ನ
ಪೊಗಳಲಾಪೆನೆ ನಾನು | (2)
ಮಗನಪರಾಧವ ತೆಗಿದೆಣಿಸದೆ ನೀ
ಲಗುಬಗೆಯಿಂದಲಿ ಪನ್ನಂಗವೇಣಿಯೆ ಬಾ|| 1 ||
ಲೋಕ ಮಾತೆಯು ನೀನು
ನಿನ್ನ ತೊಕನಲ್ಲವೇ ನಾನು |
ಆಕಳು ಕರುವಿನ ಸ್ವೀಕರಿಸುವ ಪರಿ
ನೀ ಕರುಣದಿ ಕಾಲಹಾಕು ನಮ್ಮ ಮನೆಗೆ ಬಾ || 2 ||
ಕಡೆಗೆ ನಮ್ಮನಿವಾಸ
ನಮ್ಮೂಡೆಯನಂತಾದ್ರೀಶಾ |
ಒಡೆಯನಿದ್ದಲ್ಲಿಗೆ ಮಡದಿ ಬಾಹಳೆ
ರೂಧಿಗುಚಿತವಿದು ನಡೆ ನಮ್ಮ ಮನೆಗೆ ಬಾ ॥3॥
Comments
Post a Comment