ಹೊಸಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾವಸುದೇವ ಸುತನ ಕಾಂಬುದಕೆ |ಪ|
ಘಸಣಿಯಾಗಿದೆ ಭವ ವಿಷಯ ವಾರುಧಿಯೊಳು ಶಶಿಮುಖಿ ಕರುಣದಿ ಕಾಯೆ ತಾಯೆ|ಅ.ಪ|
ಪರರ ಅನ್ನವನುಂಡು ಪರರ ಧನವ ಕಂಡು ಪರಿ ಪರಿ ಕ್ಲೇಶಗಳಿಂದ
ವರಮಹಾಲಕುಮಿ ನಿನ್ನ ಚರಣವ ಮೊರೆ ಹೊಕ್ಕೆಕರುಣದಿ ಕಣ್ಣೆತ್ತಿ ನೋಡೆ ತಾಯೆ||
ಮಂದಹಾಸಿನಿ ಭವಸಿಂಧುವಿನೊಳಗಿಟ್ಟು ಚಂದವೇ ಅಮ್ಮ ನೋಡುವದು
ಕಂದನೆಂತೆಂದೆನ್ನ ಕುಂದುಗಳೆಣಿಸದೆ ಮಂದರೊಧ್ಧರನ ತೋರಮ್ಮ ತಾಯೆ||
ಅಂದಚಂದಗಳೊಲ್ಲೆ ಬಂಧು ಬಳಗವನೊಲ್ಲೆ ಬಂಧನಕೆಲ್ಲ ಕಾರಣವು
ಇಂದಿರೇಶನ ಪಾದದ್ವಂದ್ವವ ತೋರಿ ಹೃನ್ಮಂದಿರದೊಳು ಬಂದು ನಿಲ್ಲೆ ತಾಯೆ ||
ಹೊಸಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾ (ವಸುದೇವ ಸುತನ ಕಾಂಬುದಕೆ ) 3 |ಪ|
Hosakaṇṇu enage haccalibēku jagadambāvasudēva sutana kāmbudake |
ghasaṇiyāgide bhava viṣaya vārudhiyoḷu śaśimukhi karuṇadi kāye tāye. ||
parara annavanuṇḍu parara dhanava kaṇḍu pari pari klēśagaḷinda varamahālakumi ninna caraṇava more hokkekaruṇadi kaṇṇetti nōḍe tāye ||(1)
mandahāsini bhavasindhuvinoḷagiṭṭu candavē am'ma nōḍuvadu kandanentendenna kundugaḷeṇisade mandarodhdharana tōram'ma tāye ||(2)
andacandagaḷolle bandhu baḷagavanolle bandhanakella kāraṇavu indirēśana pādadvandvava tōri hr̥nmandiradoḷu bandu nille tāye ||
hosakaṇṇu enage haccalibēku jagadambā (vasudēva sutana kāmbudake) 3 |pa|
Comments
Post a Comment