Skip to main content

Posts

Showing posts from April, 2024

Namostute Jagadeeshwari Song | Devi Song | ದೇವಿ ಹಾಡು

ನಮೋಸ್ತುತೇ ಜಗದೀಶ್ವರೀ ಕೃಪಾ ಕರೀ ಪರಮೇಶ್ವರೀ ನಮೋಸ್ತುತೇ || ಕಾತ್ಯಾಯಿನಿ ಕಲವಿಹಾರಿಣೀ ಕಮಲಾಸನಾದಿ ಕಾಮಿರೂಪಿಣಿ | ನಮೋಸ್ತುತೆ ಜಗದೀಶ್ವರಿ ಕೃಪಾ ಕರೀ ಪರಮೇಶ್ವರೀ ನಮೋಸ್ತುತೇ || ಸುಖ ಸೌಖ್ಯ ದಾತೇ ಶ್ರುತ ಪಾರಿಜಾತೆ (2) ಸುಖಲಾವನೀತೆ ಅಮರಾವಿನೀತೆ ಸರ್ವ ಮಂಗಳೆ ಸರ್ವ ಸುಂದರಿ ಸುಖಲಾವನೀತೆ ಮಘೂಡಾತ್ಮಯೇ | ನಮೋಸ್ತುತೆ ಜಗದೀಶ್ವರಿ ಕೃಪಾ ಕರಿ ಪರಮೇಶ್ವರೀ | ನಮೋಸ್ತುತೇ || Namōstutē jagadīśvari kr̥pā karī paramēśvarī namōstutē || kātyāyinī kalāvihāriṇī kamalāsanadi kāmirūpiṇi | namōstutē jagadīśvari kr̥pā karī paramēśvarī namōstutē || sukha saukhya dātē śruta pārijāte (2) sukhalavanītē amara vinītē sarva maṅgaḷe sarva sundari sukha lavanīte maghūdātmayē | namōstutē jagadīśvari kr̥pā kari paramēśvarī | namōstutē || Namostute Jagadeeshwari  Krupa Kari parameshwari  Namostute || Katyayini kalaviharini  Kamalasanadi Kamiroopini। Namostute Jagadeeshwari  Krupa Kari Parameshwari  Namostute ||  Sukha soukhya Daate Shruta Parijate (2) Sukhalavanite Amara Vineete Sarva Mangale Sarva Sundari  Sukha Lavaneete Maghoodatmaye |  Namostu

Bharave Bharati Ramana | ಭಾರವೆ ಭಾರತಿ ರಮಣ song lyrics in Kannada and english

  ಭಾರವೇ ಭಾರತಿ ರಮಣ|| ನಿನಗೆ ನಾ ಭಾರವೇ ಭಾರತೀ ರಮಣ(2)||pa|| ಲಂಕಾನಾಥನ ಬಿಂಕವ ಮುರಿದೆ ಅಕಳಂಕ ಚರಿತನ ಕಿಂಕರನೆನಿಸಿದೆ|| ಪಂಕಜಾಕ್ಷಿಗೆ ಅಂಕಿತದುಂಗುರ ಕೊಟ್ಟೆ|| ಶಂಕೆಯಿಲ್ಲದೆ ಲಂಕೆ ದಹಿಸಿರುವೆ ||ಭಾರವೇ|| ಸೋಮಕುಲದಿ ನಿಸ್ಸೀಮ ಮಹಿಮನೆನಿಸಿ ತಾಮಸ ಬಕನ ನಿರ್ಧೂಮವ ಮಾಡಿದೆ|| ಕಾಮಿನಿ ಮೋಹಿಸೆ ಪ್ರೇಮದಿ ಸಲುಹಿದೆ|| ತಾಮರಸೌಖ್ಯನ ಸೇವೆಯ ಮಾಡಿದೆ ||ಭಾರವೇ|| ವೇದವ್ಯಾಸರ ಪೂಜೆಯ ಮಾಡಿ ಮೋದದಿಂದಲಿ ಬಹುವಾದಗಳಾಡಿದೆ || ಅಧಮ ಶಾಸ್ತ್ರಗಳ ಹೋಮವ ಮಾಡಿದೆ|| ವಿಜಯವಿಠ್ಠಲನ ಸೇವಕನೆನಿಸಿದೆ ||ಭಾರವೇ|| BhAravE BhArati ramaNa|| ninage nA BhAravE BhAratI ramaNa (2)||pa|| lankAnAthana binkava muride akaLanka caritana kinkaraneniside || pankajAkShige ankitadungura koTTe|| Shankeyillade lanke dahisiruve ||BhAravE|| sOmakuladi nissIma mahimanenisi tAmasa bakana nirdhUmava mADide || kAmini mOhise prEmadi saluhide|| tAmarasauKyana sEveya mADide ||BhAravE|| vEdavyAsara pUjeya mADide mOdadindali bahuvAdagaLADide || adhama SAstragaLa hOmava mADide|| vijayaviThThalana sEvakaneniside ||BhAravE||

Shri Ram nama bhajisidavage ~ Ram navami special song

  ಶ್ರೀ  ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ     ||  ಪ  || (2) ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ                  ||  ಅ. ಪ  ||(2) ಶಿವನು ಧನ್ಯನಾದ ಮೌನಿ ಯುವತಿ ಪಾವನೆಯಾದಳು (2) ರವಿಯ ಸುತನು ಪದವಿ ಪಡೆದ (2),  ಧ್ರುವನು ದಿವಿಜನೆನಿಸಿದ  ||  ೧  ||  ಶ್ರೀ  ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ      ||  ಪ  ||  ಕರಿವರ ಪ್ರಹ್ಲಾದ ದ್ರೌಪದಿ ವರವಿಭೀಷಣರೆಲ್ಲರೂ   (2)                    ಹರಿಯ ಸ್ಮರಣೆ ಮಾಡಿ ಸುಖ (2)  ಭರಿತರಾಗಲಿಲ್ಲವೇ   ||  ೨  ||  ಶ್ರೀ  ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ      ||  ಪ  ||  ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆಯಾದಳು (2) ವರದ ಗೋಪಾಲ ವಿಠಲ ನಾಮ (2)  ದುರಿತಕಾನನ ಪಾವಕ     ||  ೩  || ಶ್ರೀ  ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ      ||  ಪ  ||  ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ   ಶ್ರೀ  ರಾಮನಾಮ ಭಜಿಸಿದವಗೆ  ಉಂಟೆ ಭವದ ಬಂಧನ   (3)   Śrī rāmanāma bhajisidavage uṇṭe bhavada bandhana || pa || (2) kāmaharana satiyu sadā nēmadinda bhajisuva || a.Pa ||(2) śivanu dhan'yanāda mauni yuvati pāvaneyādaḷu (2) raviya sutanu padavi paḍeda (2), dhruvanu divijanenisida || 1 || śrī rāmanāma bhajisidavage uṇṭe bhavada bandhana || pa || karivara prahlāda draupadi v

Chaitra Gauri pooja song | ಚೈತ್ರ ಗೌರಿ ಪೂಜೆ ಹಾಡು

ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು | ಅರಿಶಿಣ ಕುಂಕುಮ ಪರಿ ಪರಿ ಹೂಗಳು ಮುರಹರ ನರಸಿಗೆ ಮುಡಿಸುವೆ ಬೇಗನೆ ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಗಂಧಕ್ಷತೆಯಿಂ  ತೆಂಗಿನ ಫಲಗಳು ಚಂದದಿಂದಲಿ  ನೈವೇದ್ಯವ ಮಾಡುವೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಇಂದಿರೇಶನ ರಾಣಿ ವೃಂದಾವನಿಯಳೆ ಮಂದಹಾಸದಿ ನೀನು ಇಂದು ವರವ ನೀಡೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ Pūjeya māḍuvenu śrī gauriya pūjeyu māḍuvenu | ariśina kuṅkuma pari pari hūgaḷu murahara narasige mudisuve bēganē pūjeya māḍuvenu śrī gauriya pūjeya māḍuvenu ॥ gandhākṣateyiṁ teṅgina phalagaḷu candadindali naivēdyava māḍuve pūjeya māḍuvenu śrī gauriya pūjeya māḍuvenu ॥ indirēśana rāṇi vr̥ndāvaniyalē mandahāsadi nīnu indu varava nīḍe pūjeya māḍuvenu śrī gauriya pūjeya māḍuvenu  Poojeya Maaduvenu Shri gauriya Poojeyu maaduvenu |  Arishina kumkuma  Pari pari Hoogalu Murahara Narsige mudisuve Begane Poojeya maaduvenu Shri Gauriya Poojeya Maaduvenu  Gandhakshateyim tengina phalagalu Chandadindali naivedyava Maaduve Poojeya Maad

Sampoorna Gauri Hadu Lyrics | Shukravara Gauri Hadu | Shravana shukravara ಗೌರಿ ಹಾಡು

  ಹೊಳವಂಬಟ್ಟಲು ಕೊಂಬೆಣ್ಣೆಯನು ನಳಿನಾಕ್ಷಿ ಸಿರಿ ಮುಡಿ ಗೊಪ್ಪುವೆನು ಥಳಿ ಥಳಿಸುವ ಪರಿಮಳ ಪನ್ನೀರಿಲೆ ಅಭಿಷೇಕವ ನೆರವೆ | ಸುರಗುರಳೆಂಬಂತೆ ಥಳಿಗೊಳುತಿದ್ದೆ ನಳಿ ತೊಳಿಗೆ ಸಿರಿ ಗಂಧವ ಲೇಪಿಸಿ ಸಿರಿಯು ಸಂಪನ್ನಿ ಮಾರ್ಜನಕೆರಗಿ ಮಡಿಗಳನುಡಿಸುವೆನ | ಜಯ ಜಯ ಮಂಗಳ || ಅರಿಶಷಿಣ ಕುಂಕುಮ ಗಂಧ ಬುಕ್ಕಿಟ್ಟು ಗೆಜ್ಜಿ ವಸ್ತ್ರ ಪಾರಿಜಾತ ಸಂಪಿಗೆಯು ಮುಡಿಸಿ ಮಲ್ಲಿಗೆ ದಂಡಿ ಒಡಿಸಿ ತೆಂಗಿನಕಾಯಿ ಉಡಿಗಳ ತುಂಬುವೆನ | ಜಯ ಜಯ ಮಂಗಳ || ಉಪ್ಪು ಕೋಸಂಬರಿ ಹಪ್ಪಳ ಸಂಡಿಗೆ ಚೂಚ ನಿಂಬಿಹಣ್ಣು ಮಾಗಿನ ಬೇರು ತದಕಿನ ಕಾಯಿ ಮೆಣಸಿನ ಗರಿಯು ಲವಣ ಶಾಖವ ಬಡಿಸ ಶಾಖಕ ಉತ್ತಮ ಚೋಗಚಿ ಕಾಯೀ ಹಾಗಲಕಾಯಿ ಹೀರಿ ದಳವು ಬಾಳೆದಿಂಡಿನ ತಾಳಲ ಬಡಿಸುವೆ ಆರೋಗಣೆ ಮಾಡ | ಜಯ ಜಯ ಮಂಗಳ || ಸೂಕ್ಷ್ಮದ ಕೆಲಸಕೆ ಸೂಸಲ ಕಡುಬು ಚಕ್ಕುಲಿ ಕರ್ಚಿಕಾಯಿ ಸುರಳಿ ಶೀಖೆದುಂಡಿ ಹೋಳಿಗೆ ಕಡುಬು ಶಾವಿಗೆ ಪಾಯಸ ಭಕ್ಷಂಗಳ ಬಡಿಸುವೆನ | ಜಯ ಜಯ ಮಂಗಳ || ಬೀಸೋರಿಗೆ ಬಿಚ್ಚೋರಿಗೆ ಮಂಡಿಗೆ ಸಾಕ್ಷಾತ್ ಎಡಿ ಎಣ್ಣೋರಿಗೆ ಹೋಳಿಗೆ ಅಚ್ಚೆಳ್ಳಿನ ಲಡ್ಡಿಗೆ ಗುಳ್ಳೋರಿಗೆ ಫೇಣಿ ಸಕ್ಕುರಿ ಬುಂದ್ಯ ಚಿತ್ರನ್ನವು ಕ್ಷೀರನ್ನ ವ್ರತನ್ನ ಉತ್ತುಮ ಮಧ್ಯದಿ ದಧಿ ಮಧುರನ್ನ ಒಪ್ಪುವ ಹಸ್ತಕೆ ದಕ್ಷಿಣೆ ತಾಂಬೂಲ ಆರೋಗನಣೆ ಮಾಡ | ಜಯ ಜಯ ಮಂಗಳ || ಆರೋಗಣೆ ಮಾಡ ಅಂಬುಜ ಮಾತೆ ಆರೋಗಣೆ ಮಾಡ  ನಾರಾಯಣ ಪ್ರೀತೇ ಆರೋಗಣೆ ಮಾಡ್ ಯೆನ್ನುತ ಕೊಲ್‌ಹಾಪುರದ ದೇವಿ ಶ್ರೀ ಮಹಾಲಕ್ಷ್ಮಿಗೆ | ಜಯ ಜಯ ಮಂಗಳ || ಉತ್ತರ ದೇಶದ ಮುತ್ತೈ

Naa Ninnolanya Beduvudilla Yenna Lyrics / ನಾ ನಿನ್ನೊಳನ್ಯಾ ಬೇಡುವುದಿಲ್ಲ ಎನ್ನ Lyrics

ನಾ ನಿನ್ನೊಳನ್ಯಾ ಬೇಡುವುದಿಲ್ಲ ಎನ್ನ ಹೃದಯ ಕಮಲದೊಳು ನಿಂತಿರೋ ಹರಿಯೆ.. ಹರಿಯೆ. (2) ಶಿರ ನಿನ್ನ ಚರಣಕ್ಕೆ ಎರಗಲಿ ಎನ್ನ ಚಕ್ಷು ಸದಾ ನಿನ್ನ ನೋಡಲಿ... ಎನ್ನ ಗೀತಂಗಳ ಕೇಳಲಿ... ನಿನ್ನ ನೀರುಮಾಲ್ಯವ ನಾಸ ಘ್ರಾಣಿಸಲಿ ಹರಿಯೆ.. ಹರಿಯೆ..(2) ನಾಲಿಗೆ ನಿನ್ನ ಕೊಂಡಾಡಲಿ ಯೆನ್ನ ಕರಗಲೆರಡು ನಿನ್ನನಾರ್ಚಿಸಲಿ ಯೆನ್ನ ಚರಣ ಪ್ರದಕ್ಷಿಣೆ ಮಾಡಲಿ ಯೆನ್ನ ಮನ ಅನುದಿನ ನಿನ್ನ ಸ್ಮರಿಸಲಿ ಹರಿಯೆ … ಹರಿಯೆ (2) ಬುದ್ಧಿ ನಿನ್ನೊಳು ಬೆರತ್ ಹೋಗಲಿ ಯೆನ್ನ ಚಿತ್ತ ನಿನ್ನೊಳು ಸ್ಥಿರವಾಗಲಿ ನಿನ್ನ ಭಕ್ತ ಜನರ ಸಂಗ ವಾಗಲಿ ನೀನಿಷ್ಟೇ ದಯಾ ಪಾಲಿಸೋ ಪುರಂದರ ವಿಠಲ🙏🏻 ಹರಿಯೆ... ಹರಿಯೆ.... Nā ninnoḷan'yā bēḍuvudilla yenna hr̥daya kamaladoḷu nintirō hariye.. Hariye. (2) Śira ninna caraṇakke yaragāḷi.. Yenna cakṣu sadā ninna nōḍali... Yenna karṇa gītāṅgaḷa kēḷali... Ninna nīrumālyava nāsa ghrāṇisali hariye.. Hariye..(2) Nālige ninna koṇḍāḍali yenna karagaleraḍu ninnanārcisali yenna caraṇa pradakṣiṇe māḍali yenna mana anudina ninna smarisali hariye… hariye (2) Bud'dhi ninnoḷu berat hōgali yenna citta ninnoḷu sthiravāgali ninna bhakta janara saṅga vāgali nīniṣṭē dayā pālisō purandara viṭhala🙏🏻 hariye.