Skip to main content

Yeddu barutare Node - Lyrics in Kannada and English

 


Shri Guru Raghvendraswamy Song - written by Jagannatha Dasaru . 


ಎದ್ದು ಬರುತಾರೆ ನೋಡ – ತಾವೆದ್ದು

ಬರುತಾರೆ ನೋಡೆ  ಗುರುಗಳು         || ಪ ||

ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತಲಿ    || ಅ ||

ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಗಳು
ಚೆಲುವ ಮುಖದೊಳು ಪೊಳೆವೊ ದಂತಗಳಿಂದ        || ೧ ||

ಹೃದಯಸದನದಲ್ಲಿ ಪದುಮನಾಭನ ಭಜಿಸಿ
ಮುದಮನದಿಂದ ನಿತ್ಯ ಸದಮಲ ರೂಪತಾಳಿ    || ೨ ||

ದಾತ ಗುರುಜಗನ್ನಾಥವಿಠ್ಠಲನ್ನ
ಪ್ರೀತಿಯ ಪಡಿಸುತ ದೂತರ ಪೊರೆಯುತ        || ೩ ||

ಎದ್ದು ಬರುತಾರೆ ನೋಡ – ತಾವೆದ್ದು

ಬರುತಾರೆ ನೋಡೆ  (3) ಗುರುಗಳು    ||


Eddu barutāre nōḍa – tāveddu


barutāre nōḍe  gurugaḷu         || pa ||

muddu br̥ndāvana madhyadoḷaginda
tiddi haccida nāma mudregaḷindopputali    || a ||

gaḷadoḷu śrī tuḷasi naḷinākṣi mālegaḷu
celuva mukhadoḷu poḷevo dantagaḷinda        || 1 ||

hr̥dayasadanadalli padumanābhana bhajisi
mudamanadinda nitya sadamala rūpatāḷi    || 2 ||

dāta gurujagannāthaviṭhṭhalanna
prītiya paḍisuta dūtara poreyuta        || 3 ||

eddu barutāre nōḍa – tāveddu

barutāre nōḍe  (3) gurugaḷu    ||


Comments

Popular posts from this blog

SHARANU SIDDHI VINAYAKA - LYRICS (Kannada & English)

SHARANU SIDDHI VINAYAKA LYRICS in kannada and English  👉🏻lyrics In English: sharaNu siddhi vinAyaka sharaNu vidyA pradAyaka sharaNu pArvati tanaya mUruti sharaNu mUshaka vAhana niTila nEtrana dEvi sutane nAgabhUShaNa priyane taTila tAnkita kOmalAngane karNa kuNDala dhArane baTTa muttina padaka hArane bAhu hasta chatuShTane iTTa tOdugeya hEma kankaNa pAsha ankuSha dhArane kukShi maha lambOdarane ikShuchApana gelidane pakShi vAhana siri purandara viTThalana nija dAsane 👉🏻lyrics In Kannada ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಷಕವಾಹನ || ಪಲ್ಲವಿ || ನಿಟಿಲನೇತ್ರನೇ  ದೀವಿ ಸುತನೆ ನಾಗಭೂಷಣ ಪ್ರೀಯನೇ ತಟೆಲತಾಂಕಿತ ಕೋಮಲಾಂಗನೇ ಕರ್ಣಕುಂಡಲ ಧಾರನೆ ||1|| ಬಟ್ಟಮುತ್ತಿನ ಪದಕಹಾರನೇ ಬಾಹುಹಸ್ತ ಚತುಷ್ಟನೇ ಇಟ್ಟತೊಡುಗೆಯ ಹೇಮಕಂಕಣ ಪಾಶ ಅಂಕುಶಧಾರಣನೆ ||2|| ಕುಕ್ಷಿಮಹಾಲಂಬೋದರನೇ  ಇಕ್ಷುಚಾಪನ ಗೆಲಿದನೆ ಪಕ್ಷಿವಾಹನ ಸಿರಿ ಪುರಂದರ ವಿಠ್ಠಲನ ನಿಜದಾಸನೇ ||3|| click this video to hear the tune and learn it,

Chaitra Gauri pooja song | ಚೈತ್ರ ಗೌರಿ ಪೂಜೆ ಹಾಡು

ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು | ಅರಿಶಿಣ ಕುಂಕುಮ ಪರಿ ಪರಿ ಹೂಗಳು ಮುರಹರ ನರಸಿಗೆ ಮುಡಿಸುವೆ ಬೇಗನೆ ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಗಂಧಕ್ಷತೆಯಿಂ  ತೆಂಗಿನ ಫಲಗಳು ಚಂದದಿಂದಲಿ  ನೈವೇದ್ಯವ ಮಾಡುವೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಇಂದಿರೇಶನ ರಾಣಿ ವೃಂದಾವನಿಯಳೆ ಮಂದಹಾಸದಿ ನೀನು ಇಂದು ವರವ ನೀಡೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ Pūjeya māḍuvenu śrī gauriya pūjeyu māḍuvenu | ariśina kuṅkuma pari pari hūgaḷu murahara narasige mudisuve bēganē pūjeya māḍuvenu śrī gauriya pūjeya māḍuvenu ॥ gandhākṣateyiṁ teṅgina phalagaḷu candadindali naivēdyava māḍuve pūjeya māḍuvenu śrī gauriya pūjeya māḍuvenu ॥ indirēśana rāṇi vr̥ndāvaniyalē mandahāsadi nīnu indu varava nīḍe pūjeya māḍuvenu śrī gauriya pūjeya māḍuvenu  Poojeya Maaduvenu Shri gauriya Poojeyu maaduvenu |  Arishina kumkuma  Pari pari Hoogalu Murahara Narsige mudisuve Begane Poojeya maaduvenu Shri Gauriya Poojeya Maaduvenu  Gandhakshateyim tengina phalagalu Chandadindali na...

Sharanembe Vani Song lyrics in Kannada and English

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ (2) ವಾಗಾಭಿಮಾನಿ ವರಬ್ರಹ್ಮಾಣಿ ಸುಂದರ ವೇಣಿ ಸುಚರಿತ್ರಾಣಿ ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ || ಜಗದೊಳು ನಿಮ್ಮ ಪೊಗಲುವೆನಮ್ಮ (2) ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ (2) ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ಪಾಡುವೆ ಶ್ರುತಿಯ ಬೇಡುವೆ ಮತಿಯ (2) ಪುರಂದರ ವಿಠ್ಠಲನ ಸೋದರ ಸೊಸೆಯ (2) ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ (2) ವಾಗಾಭಿಮಾನಿ ವರಬ್ರಹ್ಮಾಣಿ ಸುಂದರ ವೇಣಿ ಸುಚರಿತ್ರಾಣಿ (2) ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ (2) Śaraṇembe vāṇi poreye kalyāṇi (2) vāgābhimāni varabrahmaṇi sundara vēṇi sucaritrāṇi śaraṇembe vāṇi poreye kalyāṇi || jagadoḷu nim'ma pogaluvēnam'ma (2) hariya tōrisendu prārthipēnam'ma (2) śaraṇembe vāṇi poreye kalyāṇi pāḍuve śrutiya bēḍuve matīya (2) purandara viṭhṭhalana sōdara soseya (2) śaraṇembe vāṇi poreye kalyāṇi (2) vāgābhimāni varabrahmaṇi sundaratā vēṇi sucaritrāṇi (2) śaraṇembe vāṇi poreye kalyāṇi (2) Sharanembe Vani Poreye Kalyani (2) Vagabhimani Varabrahmani  Sundara Veni Sucharitrani  Sharanembe Vani Poreye Kalyani || Jagadolu Nimma Pogaluvenamma (2) Hariy...