Skip to main content

Posts

Yeddu barutare Node - Lyrics in Kannada and English

  Shri Guru Raghvendraswamy Song - written by Jagannatha Dasaru .  ಎದ್ದು ಬರುತಾರೆ ನೋಡ – ತಾವೆದ್ದು ಬರುತಾರೆ ನೋಡೆ  ಗುರುಗಳು         || ಪ || ಮುದ್ದು ಬೃಂದಾವನ ಮಧ್ಯದೊಳಗಿಂದ ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತಲಿ    || ಅ || ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಗಳು ಚೆಲುವ ಮುಖದೊಳು ಪೊಳೆವೊ ದಂತಗಳಿಂದ        || ೧ || ಹೃದಯಸದನದಲ್ಲಿ ಪದುಮನಾಭನ ಭಜಿಸಿ ಮುದಮನದಿಂದ ನಿತ್ಯ ಸದಮಲ ರೂಪತಾಳಿ    || ೨ || ದಾತ ಗುರುಜಗನ್ನಾಥವಿಠ್ಠಲನ್ನ ಪ್ರೀತಿಯ ಪಡಿಸುತ ದೂತರ ಪೊರೆಯುತ        || ೩ || ಎದ್ದು ಬರುತಾರೆ ನೋಡ – ತಾವೆದ್ದು ಬರುತಾರೆ ನೋಡೆ  (3) ಗುರುಗಳು    || Eddu barutāre nōḍa – tāveddu barutāre nōḍe gurugaḷu || pa || muddu br̥ndāvana madhyadoḷaginda tiddi haccida nāma mudregaḷindopputali || a || gaḷadoḷu śrī tuḷasi naḷinākṣi mālegaḷu celuva mukhadoḷu poḷevo dantagaḷinda || 1 || hr̥dayasadanadalli padumanābhana bhajisi mudamanadinda nitya sadamala rūpatāḷi || 2 || dāta gurujagannāthaviṭhṭhalanna prītiya paḍisuta dūtara poreyuta || 3 || eddu barutāre nōḍa – tāveddu barutāre nōḍe (3) gurugaḷu ||
Recent posts

Bare Bhagyada Nidhiye- Lakshmi devi song in Kannada Lyrics

Lyrics in Kannada and English ಬಾರೆ ಭಾಗ್ಯದ ನಿಧಿಯೆ ಕರವೀರ ನಿವಾಸಿನಿ ಸಿರಿಯೆ || ಪ || ಬಾರೆ ಬಾರೆ ಕರವೀರ ನಿವಾಸಿನಿ ಬೀರಿ ಬಾರಿಗು ಸುಖ ತೋರು ನಮ್ಮ ಮನೆಗೆ ಬಾ , ನಿಗಮವಂದ್ಯಳು ನೀನು ನಿನ್ನ ಪೊಗಳಲಾಪೆನೆ ನಾನು | (2) ಮಗನಪರಾಧವ ತೆಗಿದೆಣಿಸದೆ ನೀ ಲಗುಬಗೆಯಿಂದಲಿ ಪನ್ನಂಗವೇಣಿಯೆ ಬಾ|| 1 || ಲೋಕ ಮಾತೆಯು ನೀನು ನಿನ್ನ ತೊಕನಲ್ಲವೇ ನಾನು | ಆಕಳು ಕರುವಿನ ಸ್ವೀಕರಿಸುವ ಪರಿ ನೀ ಕರುಣದಿ ಕಾಲಹಾಕು ನಮ್ಮ ಮನೆಗೆ ಬಾ || 2 || ಕಡೆಗೆ ನಮ್ಮನಿವಾಸ ನಮ್ಮೂಡೆಯನಂತಾದ್ರೀಶಾ | ಒಡೆಯನಿದ್ದಲ್ಲಿಗೆ ಮಡದಿ ಬಾಹಳೆ ರೂಧಿಗುಚಿತವಿದು ನಡೆ ನಮ್ಮ ಮನೆಗೆ ಬಾ ॥3॥ Bāre bhāgyada nidhiye karavīra nivāsini siriye || pa || bāre bāre karavīra nivāsini bīri bārigu sukha tōru nam'ma manege bā, nigamavandyaḷu nīnu ninna pogaḷalāpene nānu | (2) maganaparādhava tegideṇisade nī lagubageyindali pannaṅgavēṇiye bā|| 1 || lōka māteyu nīnu ninna tokanallavē nānu | ākaḷu karuvina svīkarisuva pari nī karuṇadi kālahāku nam'ma manege bā || 2 || kaḍege nam'manivāsa nam'mūḍeyanantādrīśā | oḍeyaniddallige maḍadi bāhaḷe rūdhigucitavidu naḍe nam'ma manege bā॥3॥ To sing along and learn this song clic

Hosa Kannu Enage Hacchalibeku Lyrics in Kannada & English

ಹೊಸಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾವಸುದೇವ ಸುತನ ಕಾಂಬುದಕೆ |ಪ| ಘಸಣಿಯಾಗಿದೆ ಭವ ವಿಷಯ ವಾರುಧಿಯೊಳು ಶಶಿಮುಖಿ ಕರುಣದಿ ಕಾಯೆ ತಾಯೆ|ಅ.ಪ| ಪರರ ಅನ್ನವನುಂಡು ಪರರ ಧನವ ಕಂಡು ಪರಿ ಪರಿ ಕ್ಲೇಶಗಳಿಂದ ವರಮಹಾಲಕುಮಿ  ನಿನ್ನ ಚರಣವ ಮೊರೆ ಹೊಕ್ಕೆಕರುಣದಿ ಕಣ್ಣೆತ್ತಿ ನೋಡೆ ತಾಯೆ|| ಮಂದಹಾಸಿನಿ ಭವಸಿಂಧುವಿನೊಳಗಿಟ್ಟು ಚಂದವೇ ಅಮ್ಮ ನೋಡುವದು ಕಂದನೆಂತೆಂದೆನ್ನ ಕುಂದುಗಳೆಣಿಸದೆ ಮಂದರೊಧ್ಧರನ ತೋರಮ್ಮ ತಾಯೆ|| ಅಂದಚಂದಗಳೊಲ್ಲೆ ಬಂಧು ಬಳಗವನೊಲ್ಲೆ ಬಂಧನಕೆಲ್ಲ ಕಾರಣವು ಇಂದಿರೇಶನ ಪಾದದ್ವಂದ್ವವ ತೋರಿ ಹೃನ್ಮಂದಿರದೊಳು ಬಂದು ನಿಲ್ಲೆ ತಾಯೆ  || ಹೊಸಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾ (ವಸುದೇವ ಸುತನ ಕಾಂಬುದಕೆ ) 3 |ಪ| Hosakaṇṇu enage haccalibēku jagadambāvasudēva sutana kāmbudake | ghasaṇiyāgide bhava viṣaya vārudhiyoḷu śaśimukhi karuṇadi kāye tāye. ||  parara annavanuṇḍu parara dhanava kaṇḍu pari pari klēśagaḷinda varamahālakumi ninna caraṇava more hokkekaruṇadi kaṇṇetti nōḍe tāye ||(1)  mandahāsini bhavasindhuvinoḷagiṭṭu candavē am'ma nōḍuvadu kandanentendenna kundugaḷeṇisade mandarodhdharana tōram'ma tāye ||(2) andacandagaḷolle bandhu baḷagavanolle bandhanakella kāraṇavu indirēśana pādadvandvava tōri

Bhalachandradharaga Aarti song | ಶಿವನ ಆರತಿ ಹಾಡು lyrics in Kannada and English

  ಶಿವನ ಆರತಿ ಹಾಡು lyrics in Kannada and English😊🙏🏻 Click here for the full song : play along and learn this beautiful song. ಭಾಲಚಂದ್ರಧರಗ ಭಕುತ ಜನ ಪೋಷಗ ಲೋಲ ಪಾರ್ವತಿ ಮನೋಹರ ಸಾಂಬಗ | ನೀಲ ಕಂದರ ನಿಗಮ ಭವ್ಯ ಮಹಾದೇವಗ ಕಾಲ ಹರ ಕಲ್ಪಾಂತ ಮಹಾರುದ್ರಗ ನಮೋ | ಜಯ ಮಂಗಲಂ ನಿತ್ಯ ಶುಭ ಮಂಗಳಮ್ ॥ ಗಂಗೆಯನು ಪೊತ್ತವಗ ಗಜಚರ್ಮ ನುತ್ತವಗ ಪಿಂಗಜತಟಿ ಫಣಿ ನೇತ್ರ ಕ್ಷಿಪಿವೀಷ್ಟಗ | ಮಂಗಳಾತ್ಮಕ ವದನ ವಪುತ ಹಚಿ ಭಸ್ಮವನು ಅಂಗಕ್ಕ ಲೇಪಿಸಿದ ಅಗಜವರಗ ನಮೋ | ಜಯ ಮಂಗಲಂ ನಿತ್ಯ ಶುಭ ಮಂಗಳಮ್ ॥ ರುಂಡ ಮಾಲಾಧರಗ ಮಂಡಿತ ವಿಭೂಷಣಗ ಹಿಂಡು ದೈತ್ಯರಗೊಡೆಯ ನೆನಿಸುವವಗೆ | ಬ್ರಹ್ಮಾಂಡ ಪಿಂಡಾಂಡ ಪೂಜಿತ ಮಹೇಶಗ ಚಂಡಾಂಶುಛೇದ ಶಿವ ಸಿದ್ಧೇಶಗ ನಮೋ | ಜಯ ಮಂಗಳಂ ನಿತ್ಯ ಶುಭ ಮಂಗಳಂ (2) Bhālacandradharagā bhakuta jana pōṣaga lōla pārvati manōhara sambagā | nīla kandara nigama bhavya mahādēvagā kāla hara kalpānta mahārudrāga namō | jaya maṅgalaṁ nitya śubha maṅgaḷam॥ gaṅgeyanu poṭṭavaga gajacarma nuṭṭavāga piṅgajati phaṇi nētrā kṣipivīṣṭaga | maṅgaḷātmaka vādana vapuṭa hacci bhasmavanu  aṅgakka lēpisida agajavaraga namō | jaya maṅgalaṁ nitya śubha maṅgaḷam॥ ruṇḍa mālādhāraga maṇḍita vibhūṣaṇāga | hindū daityaragoḍeya

Namostute Jagadeeshwari Song | Devi Song | ದೇವಿ ಹಾಡು

ನಮೋಸ್ತುತೇ ಜಗದೀಶ್ವರೀ ಕೃಪಾ ಕರೀ ಪರಮೇಶ್ವರೀ ನಮೋಸ್ತುತೇ || ಕಾತ್ಯಾಯಿನಿ ಕಲವಿಹಾರಿಣೀ ಕಮಲಾಸನಾದಿ ಕಾಮಿರೂಪಿಣಿ | ನಮೋಸ್ತುತೆ ಜಗದೀಶ್ವರಿ ಕೃಪಾ ಕರೀ ಪರಮೇಶ್ವರೀ ನಮೋಸ್ತುತೇ || ಸುಖ ಸೌಖ್ಯ ದಾತೇ ಶ್ರುತ ಪಾರಿಜಾತೆ (2) ಸುಖಲಾವನೀತೆ ಅಮರಾವಿನೀತೆ ಸರ್ವ ಮಂಗಳೆ ಸರ್ವ ಸುಂದರಿ ಸುಖಲಾವನೀತೆ ಮಘೂಡಾತ್ಮಯೇ | ನಮೋಸ್ತುತೆ ಜಗದೀಶ್ವರಿ ಕೃಪಾ ಕರಿ ಪರಮೇಶ್ವರೀ | ನಮೋಸ್ತುತೇ || Namōstutē jagadīśvari kr̥pā karī paramēśvarī namōstutē || kātyāyinī kalāvihāriṇī kamalāsanadi kāmirūpiṇi | namōstutē jagadīśvari kr̥pā karī paramēśvarī namōstutē || sukha saukhya dātē śruta pārijāte (2) sukhalavanītē amara vinītē sarva maṅgaḷe sarva sundari sukha lavanīte maghūdātmayē | namōstutē jagadīśvari kr̥pā kari paramēśvarī | namōstutē || Namostute Jagadeeshwari  Krupa Kari parameshwari  Namostute || Katyayini kalaviharini  Kamalasanadi Kamiroopini। Namostute Jagadeeshwari  Krupa Kari Parameshwari  Namostute ||  Sukha soukhya Daate Shruta Parijate (2) Sukhalavanite Amara Vineete Sarva Mangale Sarva Sundari  Sukha Lavaneete Maghoodatmaye |  Namostu

Bharave Bharati Ramana | ಭಾರವೆ ಭಾರತಿ ರಮಣ song lyrics in Kannada and english

  ಭಾರವೇ ಭಾರತಿ ರಮಣ|| ನಿನಗೆ ನಾ ಭಾರವೇ ಭಾರತೀ ರಮಣ(2)||pa|| ಲಂಕಾನಾಥನ ಬಿಂಕವ ಮುರಿದೆ ಅಕಳಂಕ ಚರಿತನ ಕಿಂಕರನೆನಿಸಿದೆ|| ಪಂಕಜಾಕ್ಷಿಗೆ ಅಂಕಿತದುಂಗುರ ಕೊಟ್ಟೆ|| ಶಂಕೆಯಿಲ್ಲದೆ ಲಂಕೆ ದಹಿಸಿರುವೆ ||ಭಾರವೇ|| ಸೋಮಕುಲದಿ ನಿಸ್ಸೀಮ ಮಹಿಮನೆನಿಸಿ ತಾಮಸ ಬಕನ ನಿರ್ಧೂಮವ ಮಾಡಿದೆ|| ಕಾಮಿನಿ ಮೋಹಿಸೆ ಪ್ರೇಮದಿ ಸಲುಹಿದೆ|| ತಾಮರಸೌಖ್ಯನ ಸೇವೆಯ ಮಾಡಿದೆ ||ಭಾರವೇ|| ವೇದವ್ಯಾಸರ ಪೂಜೆಯ ಮಾಡಿ ಮೋದದಿಂದಲಿ ಬಹುವಾದಗಳಾಡಿದೆ || ಅಧಮ ಶಾಸ್ತ್ರಗಳ ಹೋಮವ ಮಾಡಿದೆ|| ವಿಜಯವಿಠ್ಠಲನ ಸೇವಕನೆನಿಸಿದೆ ||ಭಾರವೇ|| BhAravE BhArati ramaNa|| ninage nA BhAravE BhAratI ramaNa (2)||pa|| lankAnAthana binkava muride akaLanka caritana kinkaraneniside || pankajAkShige ankitadungura koTTe|| Shankeyillade lanke dahisiruve ||BhAravE|| sOmakuladi nissIma mahimanenisi tAmasa bakana nirdhUmava mADide || kAmini mOhise prEmadi saluhide|| tAmarasauKyana sEveya mADide ||BhAravE|| vEdavyAsara pUjeya mADide mOdadindali bahuvAdagaLADide || adhama SAstragaLa hOmava mADide|| vijayaviThThalana sEvakaneniside ||BhAravE||

Shri Ram nama bhajisidavage ~ Ram navami special song

  ಶ್ರೀ  ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ     ||  ಪ  || (2) ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ                  ||  ಅ. ಪ  ||(2) ಶಿವನು ಧನ್ಯನಾದ ಮೌನಿ ಯುವತಿ ಪಾವನೆಯಾದಳು (2) ರವಿಯ ಸುತನು ಪದವಿ ಪಡೆದ (2),  ಧ್ರುವನು ದಿವಿಜನೆನಿಸಿದ  ||  ೧  ||  ಶ್ರೀ  ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ      ||  ಪ  ||  ಕರಿವರ ಪ್ರಹ್ಲಾದ ದ್ರೌಪದಿ ವರವಿಭೀಷಣರೆಲ್ಲರೂ   (2)                    ಹರಿಯ ಸ್ಮರಣೆ ಮಾಡಿ ಸುಖ (2)  ಭರಿತರಾಗಲಿಲ್ಲವೇ   ||  ೨  ||  ಶ್ರೀ  ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ      ||  ಪ  ||  ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆಯಾದಳು (2) ವರದ ಗೋಪಾಲ ವಿಠಲ ನಾಮ (2)  ದುರಿತಕಾನನ ಪಾವಕ     ||  ೩  || ಶ್ರೀ  ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ      ||  ಪ  ||  ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ   ಶ್ರೀ  ರಾಮನಾಮ ಭಜಿಸಿದವಗೆ  ಉಂಟೆ ಭವದ ಬಂಧನ   (3)   Śrī rāmanāma bhajisidavage uṇṭe bhavada bandhana || pa || (2) kāmaharana satiyu sadā nēmadinda bhajisuva || a.Pa ||(2) śivanu dhan'yanāda mauni yuvati pāvaneyādaḷu (2) raviya sutanu padavi paḍeda (2), dhruvanu divijanenisida || 1 || śrī rāmanāma bhajisidavage uṇṭe bhavada bandhana || pa || karivara prahlāda draupadi v