ಕಾಯಲಾರೆನೋ ಕೃಷ್ಣ ಕಂಡವರ ಬಾಗಿಲನು ನಾಯೀ ಕುನ್ನಿಯಂತೆ ನರರ ಪೀಡಿಸುತ॥ ಕಾಯಲಾರೆನೊ ಕೃಷ್ಣಾ... ಉದಯದಲಿ ಯೆದ್ದು ಸಂಧ್ಯಾ ವಿಧಿಗಳ ತೊರೆದು ಪದುಮನಾಭನ ಸ್ಮರಣೆ ಮೊದಲಿಲ್ಲದೆ ಮುದದಿ ನಿನ್ನರ್ಚಿಸದೆ ನರರ ಸದನವ ಪೊಕ್ಕು ಒದಗಿ ಸೇವೆ ಮಾಡಿ ಅವರ ಬಾಗಿಲನು …. ಕಾಯಲಾರೆನೋ ಕೃಷ್ಣ ಕಂಡವರ ಬಾಗಿಲನು ನಾಯೀ ಕುನ್ನಿಯಂತೆ ನರರ ಪೀಡಿಸುತ॥ ಕಾಯಲಾರೆನೊ ಕೃಷ್ಣಾ... ಕಲ್ಲು ಕರಗಿಸಬಹುದು ಕಡಲೆ ಹುರಿಗಡಲೆಯಲ್ಲಿ ತೈಲವನ್ನು ತೆಗೆದಾಗ ಉಣಬಹುದು ಬಲ್ಲಿದರಮನಸು ಮೆಚ್ಚಿಸಲಾರೆ ಪ್ರತಿದಿನದಿ ಹಲ್ಲು ಗಿರಿ ಗಿರಿದು ಹಂಬಲಿಸಿ ಬಾಯಿ ಬಿಡುತ ಕಾಯಲಾರೆನೋ ಕೃಷ್ಣ ಕಂಡವರ ಬಾಗಿಲನು ನಾಯೀ ಕುನ್ನಿಯಂತೆ ನರರ ಪೀಡಿಸುತ॥ ಕಾಯಲಾರೆನೊ ಕೃಷ್ಣಾ... ಇಂತು ನಾನಾ ಚಿಂತೆ ಯಲಿ ನಿನ್ನ ನೆನೆಯದಲೆ ಭ್ರಾಂತಿಯೆಂಬ ಹೆಬ್ಬಲಿಗೆ ಸಿಲುಕಿ ಅಂತ್ಯ ಮೊದಲನು ಕಾಣೆ ಅರಿಕೆ ನಿನಗಿನಿತಯ್ಯ ನಿಶ್ಚಿಂತನಾಗಿರಿಸಯ್ಯ ಪುರಂದರ ವಿಠಲ ಕಾಯಲಾರೆನೋ ಕೃಷ್ಣ ಕಂಡವರ ಬಾಗಿಲನು ನಾಯೀ ಕುನ್ನಿಯಂತೆ ನರರ ಪೀಡಿಸುತ॥ ಕಾಯಲಾರೆನೊ ಕೃಷ್ಣಾ...॥ Kayalareno Krishna kandavara bagilanu Nayi kunni yante narara peedisuta Kayalareno Krishna … Udayadali yeddu Sandhya vidhigala Toredu Padumanabhana smarane Modalillade Mudadi ninnarchisade Narara ...
ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ (2) ವಾಗಾಭಿಮಾನಿ ವರಬ್ರಹ್ಮಾಣಿ ಸುಂದರ ವೇಣಿ ಸುಚರಿತ್ರಾಣಿ ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ || ಜಗದೊಳು ನಿಮ್ಮ ಪೊಗಲುವೆನಮ್ಮ (2) ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ (2) ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ಪಾಡುವೆ ಶ್ರುತಿಯ ಬೇಡುವೆ ಮತಿಯ (2) ಪುರಂದರ ವಿಠ್ಠಲನ ಸೋದರ ಸೊಸೆಯ (2) ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ (2) ವಾಗಾಭಿಮಾನಿ ವರಬ್ರಹ್ಮಾಣಿ ಸುಂದರ ವೇಣಿ ಸುಚರಿತ್ರಾಣಿ (2) ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ (2) Śaraṇembe vāṇi poreye kalyāṇi (2) vāgābhimāni varabrahmaṇi sundara vēṇi sucaritrāṇi śaraṇembe vāṇi poreye kalyāṇi || jagadoḷu nim'ma pogaluvēnam'ma (2) hariya tōrisendu prārthipēnam'ma (2) śaraṇembe vāṇi poreye kalyāṇi pāḍuve śrutiya bēḍuve matīya (2) purandara viṭhṭhalana sōdara soseya (2) śaraṇembe vāṇi poreye kalyāṇi (2) vāgābhimāni varabrahmaṇi sundaratā vēṇi sucaritrāṇi (2) śaraṇembe vāṇi poreye kalyāṇi (2) Sharanembe Vani Poreye Kalyani (2) Vagabhimani Varabrahmani Sundara Veni Sucharitrani Sharanembe Vani Poreye Kalyani || Jagadolu Nimma Pogaluvenamma (2) Hariy...